ರಾಜ್ಯದ ಎಲ್ಲಾ ಸಮಸ್ತ ಬಾಂಧವರೇ ಮತ್ತು ಅದೃಷ್ಟ ವಾಣಿ ಜಾಲತಾಣದ ಓದುಗರೆ ನಿಮಗೆಲ್ಲ ಮತ್ತೆ ನಮ್ಮ ಜಾಲತಾಣಕ್ಕೆ ಸ್ವಾಗತ. ಕರ್ನಾಟಕದಲ್ಲಿ 10 ಲಕ್ಷ ಪಿಎಂ ಕಿಸಾನ್ ಫಲಾನುಭವಿ ರೈತರಗಳ ಹೆಸರು ಕ್ಯಾನ್ಸಲ್ ಆಗಿರುತ್ತವೆ ಇದಕ್ಕೆ ಏನು ಕಾರಣ ಎಂದು ಈ ಅಂಕಣದಲ್ಲಿ ತಿಳಿಯೋಣ. Pm kisan account
ಹೌದು ರೈತ ಬಾಂಧವರೇ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ರೈತರ ಹೆಸರುಗಳನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾ, ಅನರ್ಹರ ಹೆಸರು ತೆಗೆಯುವ ಕಾರ್ಯವನ್ನು ನಡೆಸುತ್ತಿದ್ದು, ರೈತರುಗಳ ತಮ್ಮ ಹೆಸರಿನಲ್ಲಿ ಜಮೀನಿನ ಖಾತೆ ಹೊಂದಿದ್ದು ಅಂತವರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿಯನ್ನು fruits id ಯಲ್ಲಿ ನೋಂದಣಿ ಮಾಡಿರುವುದಿಲ್ಲ, ಅವರ ಹೆಸರು ರದ್ದು ಆಗಿರುತ್ತವೆ.
ಇದನ್ನೂ ಓದಿ: Rain forecast : ಏಪ್ರಿಲ್ 1 ರಿಂದ ಈ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ.
ಇಂತವರ Pm kisan ಹೆಸರು ರದ್ದು ಪಕ್ಕಾ ಆಗಿವೆ.

- Ekyc ಸಮಸ್ಯೆ ಆಗಿರುವಂತ ರೈತರ ಹೆಸರುಗಳು.
- ಭೂಮಿ ದಾಖಲೆಗಳ ಕೊರತೆ ಇರುವಂತ ರೈತರು.
- ವಾರ್ಷಿಕ ಆದಾಯ ಹೆಚ್ಚು ಇರುವಂತ ರೈತರ ಖಾತೆ.
- ಸತತವಾಗಿ 3 ವರ್ಷಗಳ ಕಾಲ ತೆರಿಗೆ ಪಾವತಿ ಮಾಡಿದಂತ ಫಲಾನುಭವಿಗಳ,
ಇಂತಹ ಇನ್ನೂ ಹಲವು ಕಾರಣಗಳು ಇರುವ ರೈತರ ಹೆಸರು ಕ್ಯಾನ್ಸಲ್ ಆಗಿದ್ದು, ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ( pradhan mantri kisan samman yojana) ಯೋಜನೆಯ ಹಣ ಪಡೆಯಲು ವಂಚಿತರಾಗಿರುತ್ತಾರೆ.
ಈ ಯೋಜನೆ ಕೇಂದ್ರ ಸರ್ಕಾರದಿಂದ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಒಟ್ಟಾರೆಯಾಗಿ 54 ಲಕ್ಷಕ್ಕೂ ಹೆಚ್ಚಿನ ರೈತರಗಳು ನೋಂದಣಿ ಮಾಡಿಕೊಂಡು ವಾರ್ಷಿಕ 6,000 ಹಣಗಳನ್ನು ಮೂರು ಕಂತಿನ ರೂಪದಲ್ಲಿ ಪಡೆಯುತ್ತಿದ್ದರು. ಈಗ 44.20 ಲಕ್ಷ ಫಲಾನುಭವಿ ರೈತರಿಗೆ ಮಾತ್ರ ಯೋಜನೆಯ ಲಾಭ ಸಿಗುತ್ತದೆ.
Milk price reduction : ರೈತರಿಗೆ ಮತ್ತೆ ಅನ್ಯಾಯ! ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ 3.50 ರೂಪಾಯಿ ಕಡಿಮೆ.
ಗ್ರಾಮ ನೋಡಲ್ ಅಧಿಕಾರಿಗಳ ಪರಿಶೀಲನೆ ಮುಖಾಂತರ ಪ್ರತಿ ಭಾರಿ, ರೈತರ ನೋಂದಣಿ, ( farmers registation )ಅರ್ಹರ ಹೆಸರು ಸೇರ್ಪಡೆ, ಅನರ್ಹರ ಹೆಸ್ರು ತೆಗೆಯುವಿಕೆ ಕಾರ್ಯವು ಸದಾ ಚಲನೆಯಲ್ಲಿ ಇರುತ್ತದೆ.
ಸದ್ಯ ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆಯುತ್ತಿರುವಂತಹ ಫಲಾನುಭವಿ ರೈತನ ಒಂದು ವೇಳೆ ನಿಧನವಾದಲ್ಲಿ, ಆ ರೈತನ ವಾರಸುದಾರ ಪೌತಿ ಖಾತೆಯನ್ನು ಮಾಡಿಸಿದ್ದಲ್ಲಿ ಆಗ ಈ ಯೋಜನೆಗೆ ಅರ್ಹತೆ ಪಡೆಯುತ್ತಿದ್ದರು.
ಯೋಜನೆ ಲಾಭ ಪಡೆಯಲು ಯಾರು ಅನರ್ಹರು?
- ಮಾಸಿಕ 10,000 ಕ್ಕಿಂತ ಹೆಚ್ಚಿನ ಪಿಂಚಣಿಯನ್ನು ಪಡೆಯುತ್ತಿರುವ ನಿವೃತ್ತರು,
- ಸಂವಿಧಾನಿಕ ಹುದ್ದೆಗಳಲ್ಲಿ ಹಾಲಿ ಸದಸ್ಯರು ಮತ್ತು ಕುಟುಂಬದವರು.
- ಕಳೆದ ವರ್ಷ ಮತ್ತು ಈ ವರ್ಷ ಆದಾಯ ತೆರಿಗೆಯನ್ನು ಪಾವತಿ ಮಾಡಿದವರು.
- ಡಾಕ್ಟರ್ ಇಂಜಿನಿಯರ್ಸ್ ಲಾಯರ್ಸ್, ಮತ್ತು ಅಕೌಂಟೆಂಟ್ಸ್,
ಈ ಮೇಲೆ ತಿಳಿಸಿದ ಎಲ್ಲರೂ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ಪಡೆಯಲು ಅನರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರವು ಸಾಗುವಳಿ ಭೂಮಿಯನ್ನು ಹೊಂದಿರುವಂತಹ ಅರ್ಹ ರೈತನಿಗೆ, ಜಮೀನಿನಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಮತ್ತು ಸಾವಯವ ಕೃಷಿ ಮಾಡಲು ಹಾಗೂ ನಿರೀಕ್ಷಿತವಾದ ಆದಾಯವನ್ನು ಪಡೆಯಲು ಮೂರು ಕಂತಿಗಳಂತೆ ವಾರ್ಷಿಕವಾಗಿ 6,000 ಆರ್ಥಿಕ ಹಣವನ್ನು ನೀಡುತ್ತಿದೆ.

ಈ ಕಾರಣದಿಂದಾಗಿ ಸರ್ಕಾರವು ಕಠಿಣ ಕ್ರಮ ಕೈಗೊಂಡು ಅನರ್ಹರ ಹೆಸರುಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕುತ್ತಲಿದೆ.
ಸೂಚನೆ: ನೀವು ಲೇಖನದ ಕೊನೆಗೆ ಕೊಟ್ಟಿರುವ ಲಿಂಕ್ ಬಳಸಿ , ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಈ ಲೇಖನ ನಿಮಗೆ ಇಷ್ಟವಾದಲ್ಲಿ ಮತ್ತು ಉಪಯುಕ್ತವಾದಲ್ಲಿ ಕೂಡಲೇ ನಿಮ್ಮ ಬಂಧು ಮಿತ್ರರೊಡನೆ ಮತ್ತು ರೈತರಿಗೆ ವಾಟ್ಸಪ್ ಮತ್ತು ಫೇಸ್ಬುಕ್ ಮುಖಾಂತರ ಶೇರ್ ಮಾಡಿ.