ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ದೇಶದ ಹಿಂದುಸ್ತಾನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ವತಿಯಿಂದ ಆರ್ಥಿಕವಾಗಿ ದುರ್ಬಲ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ನೆರವ ನೀಡುವ ಉದ್ದೇಶದಿಂದ ಹೆಚ್ ಡಿ ಎಫ್ ಸಿ HDFC SCHOLORSHIP ವಿದ್ಯಾರ್ಥಿ ವೇತನವನ್ನು ಪ್ರಕಟಣೆ ಮಾಡಲಾಗಿದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಈ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ 55 ಪ್ರತಿಶತ ಅಂಕಗಳನ್ನು ಪಡೆದುಕೊಂಡಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎರಡುವರೆ ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.

HDFC SCHOLORSHIP
ಮಾನ್ಯತೆ ಪಡೆದಿರುವಂತಹ ಸಂಸ್ಥೆಯಲ್ಲಿ ನಿಯಮಿತ ಪಠ್ಯಕ್ರಮದಲ್ಲಿ ನೋಂದಾಯಿಸಿಕೊಂಡಿರಬೇಕು. ಬ್ಯಾಕ್ ಲಾಕ್ ಇರುವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ದೊರೆಯುವುದಿಲ್ಲ.
ಈ ವಿದ್ಯಾರ್ಥಿ ವೇತನದ ಮೊತ್ತವು ಬಿಎ ಬಿಎಸ್‌ಸಿ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ 30000 ಸಾವಿರ ಇರುತ್ತದೆ. Btech MBBS, bachelor of architecture ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ₹50,000 ಇರುತ್ತದೆ.
ಅರ್ಜಿಗಳನ್ನು ಸಲ್ಲಿಸಲು sslc ಮತ್ತು puc ಶೈಕ್ಷಣಿಕ ಅಂಕಪಟ್ಟಿ ಪಾಸ್ ಪೋರ್ಟ್ ಅಳತೆಗೆ ಭಾವಚಿತ್ರ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಬ್ಯಾಂಕ್ ಪಾಸ್ ಬುಕ್ ಪ್ರತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ನೀವು www.buddy4study.com ಜಾಲತಾಣಕ್ಕೆ ಭೇಟಿ ನೀಡಿ ಸಲ್ಲಿಸಬಹುದು.