ರಾಜ್ಯದಲ್ಲಿ ಹೈನುಗಾರಿಕೆಯು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಬರುತ್ತಿದ್ದು, ರೈತರು ಹೈನುಗಾರಿಕೆಯನ್ನು ತೊರೆದು ಇನ್ನಿತರ ಕೆಲಸ ಕಾರ್ಯಗಳಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. Milk price reduction
ರಾಜ್ಯ ಸರ್ಕಾರವು ಮೊನ್ನೆ ನಂದಿನಿ ಹಾಲಿನ ದರವನ್ನು 4 ರೂಪಾಯಿ ಹೆಚ್ಚಿಸಿ ಆದೇಶ ಮಾಡಿತ್ತು. ಈ ಹೆಚ್ಚುವರಿ ನಾಲಕ್ಕು ರೂಪಾಯಿ ಹಣ ರೈತರಿಗೆ ನೇರವಾಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

Milk price reduction in Haveri milk union
ಇದನ್ನೂ ಓದಿ: Rain forecast : ಏಪ್ರಿಲ್ 1 ರಿಂದ ಈ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ.
ಆದರೆ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದ್ದು, ಹಾಲು ಉತ್ಪಾದಕರಿಗೆ ಸರಕಾರದಿಂದ ಸಬ್ಸಿಡಿ ರೂಪದಲ್ಲಿ ಸಾಲವಾಗಲಿ ಮತ್ತು ದನಕರಗಳ ಪಾಲನೆ ಪೋಷಣೆ ಗಳಿಗೆ ಸರಿಯಾದ ಸೂಕ್ತವಾದ ಸಹಾಯ ದೊರಕುತ್ತಿಲ್ಲ.
ಇಂತಹ ಸಂದರ್ಭದಲ್ಲಿ ರಾಜ್ಯದ ಹಾವೇರಿ ಹಾಲು ಒಕ್ಕೂಟವು ಯಾವುದೇ ಮಾಹಿತಿಯನ್ನು ನೀಡದೆ, ಹಾಲು ಉತ್ಪಾದಕರ ಒಂದು ಲೀಟರ್ ಹಾಲಿನ ಬೆಲೆಯನ್ನು 3.5 ರೂಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ. ಈಗಾಗಲೇ ಸಂಕಷ್ಟದಲ್ಲಿರುವಂತ ಹಾಲು ಉತ್ಪಾದಕರು, ಈಗ ಹಾಲಿನ ದರ ಕಡಿಮೆ ಆಗಿದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷ ಕಾಲುಬಾಯಿ ರೋಗ, ಚರ್ಮಗಂಟು ರೋಗ, ಜ್ವರ ಮತ್ತು ಮುಂತಾದ ರೋಗಗಳಿಂದ ಹೈನುರಾಸುಗಳು ಬಳಲುತ್ತಿದ್ದು, ರೈತ ಹಾಕಿದ ಬಂಡವಾಳಕ್ಕೆ ಸರಿಯಾದ ಲಾಭಾಂಶ ದೊರೆಯುತ್ತಿಲ್ಲ. ಇಲ್ಲಿಯವರೆಗೆ ಒಂದು ಲೀಟರ್ನ ಎಮ್ಮೆ ಹಾಲಿಗೆ 43 ರೂಪಾಯಿಗಳನ್ನು ನೀಡಲಾಗುತ್ತಿತ್ತು.
Immunity boosting foods , ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇಲ್ಲಿವೆ.
ಮತ್ತು ಹಸುವಿನ ಹಾಲಿಗೆ 30.50 ರೂಪಾಯಿ ನೀಡುತ್ತಿದ್ದರು. ಆದರೆ ಹಾವೇರಿ ಹಾಲು ಒಕ್ಕೂಟವು ನಮಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಕಾರಣವನ್ನು ಕೊಟ್ಟು, ಪ್ರತಿ ಲೀಟರ್ ಹಾಲಿಗೆ 3.50 ರೂಪಾಯಿ ಕಟ್ ಮಾಡಿದೆ.
ಸದ್ಯ ಎಮ್ಮೆ ಹಾಲಿನ ದರವು 39.50 ಆಗಿದ್ದು, ಹಾಲಿನ ದರವು 27 ರೂಪಾಯಿ ಆಗಿದೆ. ಈ ರೀತಿ ಆದಲ್ಲಿ ಹಾಲು ಉತ್ಪಾದಕರು ಆರ್ಥಿಕ ಸಂಕಷ್ಟಕ್ಕೆ ಉಂಟಾಗಿ, ಹೈನುಗಾರಿಕೆ ಯನ್ನು ತೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
HDFC SCHOLORSHIP : ವಿದ್ಯಾರ್ಥಿಗಳಿಗೆ ₹30,000 ಸಾವಿರ ಸ್ಕಾಲರ್ಶಿಪ್ ಘೋಷಣೆ