Rain forecast : ಏಪ್ರಿಲ್ 1 ರಿಂದ ಈ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ.

2025 ರ ಮಾರ್ಚ್ ತಿಂಗಳನಿಂದ ಸೂರ್ಯ ಜನರ ನೆತ್ತಿ ಸುಡುತ್ತಿದ್ದು ಬೇಸಿಗೆಯಲ್ಲಿ ವರುಣನ ಆರ್ಭಟ ಜೋರಾಗಿ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಏಪ್ರಿಲ್ 1 ಮತ್ತು ಏಪ್ರಿಲ್ ಎರಡನೇ ತಾರೀಕಿನಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now

Rain forecast for karnataka

ರಾಜ್ಯದ ಉತ್ತರ ಒಳನಾಡು ಮತ್ತು ಕರಾವಳಿ ( coastal ) ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದ್ದು, ಗಾಳಿಯ ವೇಗವು ( wind speed) ಸುಮಾರು ಗಂಟೆಗೆ 40 ರಿಂದ 50 ಕಿಲೋಮೀಟರ್ ವರೆಗೆ ತಲುಪುವ ಸಾಧ್ಯತೆ ಇರುತ್ತದೆ. ಏಪ್ರಿಲ್ 1ನೇ ತಾರೀಖಿನಿಂದ ಮೈಸೂರು ಕೊಡಗು ಹಾಸನ ಚಿಕ್ಕಮಗಳೂರು ಈ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಆಗುವ ಸಾಧ್ಯತೆ ಇರುತ್ತದೆ.

Rain forecast for karnataka
Rain forecast for these districts

ಇದನ್ನು ಓದಿ: HDFC SCHOLORSHIP : ವಿದ್ಯಾರ್ಥಿಗಳಿಗೆ ₹30,000 ಸಾವಿರ ಸ್ಕಾಲರ್ಶಿಪ್ ಘೋಷಣೆ

ಹಾಗೆಯೇ ಏಪ್ರಿಲ್ 2ನೇ ತಾರೀಖಿನಿಂದ ಹಾವೇರಿ ಜಿಲ್ಲೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಮತ್ತು ಬೆಳಗಾವಿ ಧಾರವಾಡ ಗದಗ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಬೀಳಲಿದೆ ಎಂದು ಮಾಹಿತಿ ಇಲಾಖೆಯಿಂದ ತಿಳಿಸಲಾಗಿದೆ.

ಮಾರ್ಚ್ 31 ಅಂದರೆ ಇಂದು ಧಾರವಾಡ ಬಾಗಲಕೋಟೆ ವಿಜಯಪುರ ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆಯನ್ನು ನೀಡಲಾಗಿದೆ. 

Karnataka SSLC results 2025 , 10ನೆ ತರಗತಿಯ ಪರೀಕ್ಷೆ ಫಲಿತಾಂಶದ ಡೈರೆಕ್ಟ್ ಲಿಂಕ್ ಇಲ್ಲಿದೆ.

ನಂತರ ಏಪ್ರಿಲ್ ಮೂರನೇ ತಾರೀಖಿನಿಂದ ರಾಜ್ಯದ ಒಳನಾಡಿನ ಜಿಲ್ಲೆಗಳಾದ ಹಾಸನ ಕೊಡಗು ಮೈಸೂರು ಧಾರವಾಡ ಗದಗ ಹಾವೇರಿ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ವೇಗದ ಗಾಳಿ ಮತ್ತು ಮಳೆಯಾಗಲಿದೆ. 

ಈ ವರ್ಷ ಏಪ್ರಿಲ್ 13ನೇ ತಾರೀಖಿನಿಂದ ಹೊಸ ಮಳೆ ಪ್ರವೇಶ ಮಾಡಲಿದ್ದು, ಈ ವರ್ಷ ಅಶ್ವಿನಿ ಮಳೆ ಅತಿ ಹೆಚ್ಚು ಮಳೆ ಸುರಿಸುವ ಸಾಧ್ಯತೆಗಳಿವೆ ಎಂದು ಸರ್ಕಾರಿ ಮತ್ತು ಖಾಸಗಿ ಹವಾಮಾನ ಇಲಾಖೆಗಳು ಮುನ್ಸೂಚನೆಯನ್ನು ನೀಡಿದೆ. 

Imd weather forecast
Indian meteorological department

ಅಲ್ಲದೆ ಈ ವರ್ಷ ಪೂರ್ವ ಮುಂಗಾರು ಮಳೆಗಳು ಉತ್ತಮವಾಗಿ ರಾಜ್ಯಕ್ಕೆ ಮಳೆ ತರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಬೆಳಗಾವಿ ಹಾಸನ ಕೊಡಗು ಮೈಸೂರು ಧಾರವಾಡ ಗದಗ ಚಿಕ್ಕಮಗಳೂರು, ಈ ಎಲ್ಲಾ ಜಿಲ್ಲೆಗಳಿಗೆ ಎಲ್ಲೋ alert ಘೋಷಣೆ ಮಾಡಲಾಗಿದೆ. 

ಮಳೆಯ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಲೇಖನದ ಕೊನೆಯಲ್ಲಿ ನೀಡಿರುವಂತಹ ಕೊಂಡಿಯ ಸಹಾಯದಿಂದ ಅಥವಾ ಲಿಂಕನ್ನು ಸಹಾಯದಿಂದ ತಿಳಿದುಕೊಳ್ಳಬಹುದು.

https://mausam.imd.gov.in/

Pm kisan account : ರಾಜ್ಯದ 10 ಲಕ್ಷ ರೈತರ ಪಿಎಂ ಕಿಸಾನ್ ಖಾತೆ ರದ್ದು ಮಾಡಿದ ಕೇಂದ್ರ ಸರ್ಕಾರ, ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now