ಕರ್ನಾಟಕದ ಮತದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಹೀಗಾಗಿ, ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಅಂತಾ ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಪರಿಷ್ಕರಣೆ ಸಂದರ್ಭದಲ್ಲಿ ನೀಡಲಾಗಿದ್ದ ನೋಟಿಸ್ಗಳ ವಿಚಾರಣೆ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಅದನ್ನು ಆನ್ಲೈನ್ನಲ್ಲಿಯೂ ಪರಿಶೀಲಿಸಬಹುದು.
ಇದನ್ನೂ ಓದಿ : 2026ರ ಬೆಳೆ ಪರಿಹಾರ ಸ್ಟೇಟಸ್ ಮೊಬೈಲ್ನಲ್ಲೇ ಚೆಕ್ ಮಾಡಿ; ಇಲ್ಲಿದೆ ಡೈರೆಕ್ಟ್ ಲಿಂಕ್
ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?
ಮೊಬೈಲ್ನಲ್ಲೇ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ ಅಂತಾ ಪರಿಶೀಲಿಸಬಹುದು. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ.
- ಮೊದಲು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ತೆರೆಯಿರಿ: https://voters.eci.gov.in/
- ಅಲ್ಲಿ Search Your Name in Voter List ಆಯ್ಕೆಯನ್ನು ಆರಿಸಿ.
- ನಿಮ್ಮ ಹೆಸರು, ವೈಯಕ್ತಿಕ ವಿವರಗಳು ಅಥವಾ ಮತದಾರರ ಗುರುತಿನ ಚೀಟಿ ಸಂಖ್ಯೆ (EPIC Number) ಬಳಸಿ ಹುಡುಕಿ.
- ಕೇಳಿದ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಮತದಾರರ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆಯೇ ಎಂದು ಪರಿಶೀಲಿಸಿ.
ಅಂತಿಮ ಪಟ್ಟಿ ಪ್ರಕಟವಾದ ನಂತರ ಹೊಸ ಪಟ್ಟಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯ.
ಲೇಟೆಸ್ಟ್ : ಗಂಗಾ ಕಲ್ಯಾಣ ಯೋಜನೆ 2026: ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನ
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ನಿಮ್ಮ ಹೆಸರು ಪಟ್ಟಿಯಲ್ಲಿ ಕಾಣಿಸದಿದ್ದರೆ ಗಾಬರಿಯಾಗಬೇಡಿ. ಮೊದಲು ಸರಿಯಾದ ವಿವರಗಳನ್ನು ಬಳಸಿ ಮತ್ತೊಮ್ಮೆ ಹುಡುಕಿ. ಹೆಸರು, ವಿಳಾಸ ಅಥವಾ ಇತರ ಮಾಹಿತಿಯಲ್ಲಿ ವ್ಯತ್ಯಾಸವಿದೆಯೇ ಎಂದು ಪರಿಶೀಲಿಸಿ.
ಹೊಸದಾಗಿ ಹೆಸರು ಸೇರಿಸಬೇಕಾದರೆ Form 6 ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಟ್ಟಿಯಲ್ಲಿರುವ ಹೆಸರಿನ ವಿವರಗಳಲ್ಲಿ ತಪ್ಪಿದ್ದರೆ ಅಥವಾ ವಿಳಾಸ ಬದಲಾವಣೆ ಮಾಡಬೇಕಿದ್ದರೆ, ಸಂದರ್ಭಕ್ಕೆ ಅನುಗುಣವಾಗಿ Form 8 ಬಳಸಬಹುದು.
ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಲು ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ ಬಳಸಬಹುದು. ಅಗತ್ಯವಿದ್ದರೆ ನಿಮ್ಮ ಪ್ರದೇಶದ ಬೂತ್ ಮಟ್ಟದ ಅಧಿಕಾರಿ (BLO) ಅಥವಾ ಚುನಾವಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ. (Voter Helpline)
ಮತದಾರರು ಈಗ ಏನು ಮಾಡಬೇಕು?
ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ನಿಮ್ಮ ಹೆಸರು, ವಿಳಾಸ ಮತ್ತು ಮತಗಟ್ಟೆ ವಿವರಗಳನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಕುಟುಂಬದ ಸದಸ್ಯರ ಹೆಸರೂ ಪಟ್ಟಿಯಲ್ಲಿದೆಯೇ ಎಂದು ಗಮನಿಸಿ.
ಕಬ್ಬು ಬೆಳೆಗಾರರ ಹೋರಾಟ ತೀವ್ರ: ಇಂದು ಸರ್ಕಾರದ ಮಹತ್ವದ ಸಭೆ, ರೈತರ ಬೇಡಿಕೆಗಳೇನು?
ನೆನಪಿಡಿ: ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಮತದಾರರ ಗುರುತಿನ ಚೀಟಿ (Voter ID) ಕೈಯಲ್ಲಿದೆ ಎನ್ನುವ ಕಾರಣಕ್ಕೆ ಮಾತ್ರ ಹೆಸರು ಪ್ರಸ್ತುತ ಪಟ್ಟಿಯಲ್ಲಿ ಇದೆ ಎಂದು ಭಾವಿಸಬೇಡಿ.
ಅಂತಿಮ ಪಟ್ಟಿ ಪ್ರಕಟವಾದ ಬಳಿಕವೂ ಹೆಸರು ಸೇರಿಸುವ ಮತ್ತು ವಿವರಗಳನ್ನು ಸರಿಪಡಿಸುವ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ಆದ್ದರಿಂದ ಹೆಸರು ಕಾಣಿಸದಿದ್ದರೆ ಅಧಿಕೃತ ಮಾರ್ಗದರ್ಶನ ಪಡೆದು ಅಗತ್ಯ ಅರ್ಜಿ ಸಲ್ಲಿಸಿ.