ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಈ ಪರಿಷ್ಕರಣೆಯಲ್ಲಿ ಮತದಾರರ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಹೊಸ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪ್ರತಿಯೊಬ್ಬರೂ ಒಮ್ಮೆ ಪರಿಶೀಲಿಸಿಕೊಳ್ಳಿರಿ.
ಹಾಗಾದರೆ ರಾಜ್ಯದಲ್ಲಿ ಈಗ ಒಟ್ಟು ಎಷ್ಟು ಮತದಾರರಿದ್ದಾರೆ? ಪುರುಷರು ಮತ್ತು ಮಹಿಳಾ ಮತದಾರರ ಸಂಖ್ಯೆ ಎಷ್ಟು? ಹಿಂದಿನ ಪಟ್ಟಿಗೆ ಹೋಲಿಸಿದರೆ ಎಷ್ಟು ಹೆಸರುಗಳು ಕಡಿಮೆಯಾಗಿವೆ? ಮೊಬೈಲ್ನಲ್ಲೇ ನಿಮ್ಮ ಹೆಸರನ್ನು ಹೇಗೆ ಚೆಕ್ ಮಾಡಬಹುದು? ಈ ಎಲ್ಲ ಮಾಹಿತಿ ಇಲ್ಲಿದೆ.
ಡಿಸಿಎಂ ಪರಮೇಶ್ವರ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಏರುಪೇರು, ಐಸಿಯುನಲ್ಲಿ ಚಿಕಿತ್ಸೆ
ರಾಜ್ಯದಲ್ಲಿ ಇಂದಿನ ಫೈನಲ್ sir ಪಟ್ಟಿಯ ಪ್ರಕಾರ ಎಷ್ಟು ಮತದಾರ ಇದ್ದಾರೆ?
ಪ್ರಮುಖ ಅಂಕಿ-ಅಂಶಗಳು ಇಲ್ಲಿವೆ:
- ಒಟ್ಟು ಮತದಾರರು: 4,55,00,011
- ಪುರುಷ ಮತದಾರರು: 2,25,40,493
- ಮಹಿಳಾ ಮತದಾರರು: 2,29,12,355
- ತೃತೀಯ ಲಿಂಗದ ಮತದಾರರು: 2,841
- 18ರಿಂದ 19 ವರ್ಷದ ಯುವ ಮತದಾರರು: 6.83 ಲಕ್ಷಕ್ಕೂ ಹೆಚ್ಚು
- 85 ವರ್ಷ ಮೇಲ್ಪಟ್ಟ ಮತದಾರರು: 3.92 ಲಕ್ಷ
ಹಿಂದಿನ ಪಟ್ಟಿಗೆ ಹೋಲಿಸಿದರೆ ಎಷ್ಟು ಮತದಾರರು ಕಡಿಮೆಯಾಗಿದ್ದಾರೆ?
ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗುವ ಮೊದಲು, ಜೂನ್ 16, 2026ರ ವೇಳೆಗೆ ಒಟ್ಟು 5,54,32,314 ಮತದಾರರಿದ್ದರು.
ಆದರೆ ಪರಿಷ್ಕರಣೆ ಬಳಿಕ ಪ್ರಕಟವಾದ ಅಂತಿಮ ಪಟ್ಟಿಯಲ್ಲಿ 4,55,00,011 ಮತದಾರರು ಉಳಿದಿದ್ದಾರೆ.
ಇವೆರಡರ ನಡುವಿನ ವ್ಯತ್ಯಾಸವನ್ನು ಲೆಕ್ಕ ಹಾಕಿದರೆ 99,32,303 ಮತದಾರರ ಇಳಿಕೆ ಕಂಡುಬಂದಿದೆ. ಅಂದರೆ ಸುಮಾರು 99.32 ಲಕ್ಷದಷ್ಟು ವ್ಯತ್ಯಾಸವಾಗಿದೆ.
ಕರ್ನಾಟಕ ಅಂತಿಮ ಮತದಾರರ ಪಟ್ಟಿ ನಾಳೆ ಪ್ರಕಟ: ಮತದಾರರೇ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಚೆಕ್ ಮಾಡೋದು ಹೇಗೆ?
1. ಮೊದಲು ನೀವು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ open ಮಾಡಿ.
2. voter list ಇರುವ ಆಯ್ಕೆ ಒತ್ತಿರಿ
3. ಈಗ ನಿಮ್ಮ voter ಐಡಿ or epic number ಎಂಟರ್ ಮಾಡಿ.
4. ನಿಮ್ಮ ರಾಜ್ಯ ಆಯ್ಕೆ ಮಾಡಿರಿ,. ಮತ್ತು ಇನ್ನುಳಿದ ಎಲ್ಲಾ ಮಾಹಿತಿ ತುಂಬಿ.
5. ಈಗ ನಿಮ್ಮ ಹೆಸರು, ನಿಮ್ಮ ಮತಗಟ್ಟೆ ಇರುವಂತ ವಿವರ ಎಲ್ಲಾ ಸರಿಯಾಗಿ ನೋಡಿಕೊಳ್ಳಿ.
ಲಿಂಕ್ ಇಲ್ಲಿದೆ : https://voters.eci.gov.in/