2026 ಮತ್ತು 2027 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇದೇ ಗುರುವಾರ ಪ್ರಕಟಣೆ ಮಾಡಿದೆ.
ಈ ಮೊದಲು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಣೆ ಮಾಡಲಾಗಿತ್ತು. ಆದರೆ ಸಾಕಷ್ಟು ಆಕ್ಷೇಪಣೆಗಳು ಬಂದ ನಂತರ ಇದನ್ನು ತೆರವುಗೊಳಿಸಿ ಈಗ ಅಧಿಕೃತವಾಗಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಣೆ ಮಾಡಿ ಆದೇಶ ಹೊರಡಿಸಿದೆ.
ಫೆಬ್ರುವರಿ 27ರಿಂದ ಮಾರ್ಚ್ 18 2027 ವರೆಗೆ ಪಿಯುಸಿ ಪರೀಕ್ಷೆ ಒಂದು ನಡೆಯಲಿದ್ದು, 2027 ಮೇ 3ನೇ ತಾರೀಖಿನಿಂದ 15ನೇ ತಾರೀಖಿನವರೆಗೆ ಪರೀಕ್ಷೆ -2 ನಡೆಯಲಿದೆ.
ಹಾಗೆಯೇ 2027ರ ಮಾರ್ಚ್ 22 ನೇ ತಾರೀಖಿನಿಂದ ಎಪ್ರಿಲ್ 5 2027 ವರೆಗೆ SSLC ಪರೀಕ್ಷೆ -1 ನಡೆಯುತ್ತದೆ. ಮತ್ತು ಪರೀಕ್ಷೆ ಎರಡು ಮೇ 24ನೇ ತಾರೀಕಿನಿಂದ ಮೇ 31ರವರೆಗೆ ಪರೀಕ್ಷೆ -2 ನಡೆಯುತ್ತದೆ.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ಜಾಲತಾಣಗಳಲ್ಲಿ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಅಧಿಕೃತ ವೆಬ್ಸೈಟ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
https://kseab.karnataka.gov.in/en