ಸರ್ಕಾರಿ ನೌಕರರ ‘ಕರ್ತವ್ಯ’ ಆ್ಯಪ್: ಕೆಲಸ ಕಮ್ಮಿ, ಆರಾಮ್ ಜಾಸ್ತಿ!
ನಮ್ಮ ಕರ್ನಾಟಕ ಸರ್ಕಾರದಾಗ ಕೆಲ್ಸ ಮಾಡೋ ನೌಕರ ಮಂದಿಗೆ ದಿನಾ ಏನಾದ್ರೂ ಒಂದು ಕಿರಿಕಿರಿ ಇದ್ದೇ ಇರ್ತಿತ್ತು.
ರಜೆ ತಗೋಬೇಕಾದ್ರ, ಅಟೆಂಡೆನ್ಸ್ ಹಾಕಬೇಕಾದ್ರ ಅಥವಾ ಪೇ ಸ್ಲಿಪ್ ನೋಡ್ಬೇಕಾದ್ರ ಸಾಹೇಬರ ಮುಂದೆ ಸಾಲಾಗಿ ನಿಲ್ಲಬೇಕಿತ್ತು! ಆಫೀಸಿನಾಗ ಫೈಲುಗಳನ್ನ ಹುಡುಕಿ ಹುಡುಕಿ ಸಾಕಾಗಿ ಹೋಗ್ತಿತ್ತು.
ಆದ್ರೆ, ಈಗ ಸರ್ಕಾರಿ ನೌಕರರ ಲೈಫು ಫುಲ್ ಚೇಂಜ್ ಆಗೈತಿ. ‘ಕರ್ತವ್ಯ’ (Kartavya App) ಅಂತ ಹೊಸ ಆ್ಯಪ್ ಬಂದೈತಿ. ಇದು ನಿಮ್ಮ ಕೈಯಾಗಿದ್ರ, ಕಚೇರಿ ಕೆಲಸಗಳೆಲ್ಲಾ ನಿಮ್ಮ ಬೆರಳ ತುದಿಯಾಗ ನಡೀತಾವು!
ಬರ್ರಿ ತಡ್ಯಾಕ್ ಮಾಡೋದು? ಈ ‘ಕರ್ತವ್ಯ’ ಆ್ಯಪ್‌ನಾಗ ಏನೇನ್ ಕಮಾಲ್ ಐತಿ ಅಂತ ಸರಳವಾಗಿ ತಿಳಿದುಕೊಳ್ಳೋಣ!
ಏನಿದು Kartavya App?
ಸರಳವಾಗಿ ಹೇಳ್ಬೇಕಂದ್ರ, ಇದು ನಮ್ಮ ಸರ್ಕಾರಿ ನೌಕರರಿಗಾಗಿಯೇ ಬಂದಿರೋ ಒಂದು ಡಿಜಿಟಲ್ ಹೆಲ್ಪರ್ ಇದ್ದಂಗೆ. ಮೊದಲು ಕಂಪ್ಯೂಟರ್ ಮುಂದೆ ಕೂತು ಹೆಚ್.ಆರ್.ಎಮ್.ಎಸ್ (HRMS) ವೆಬ್‌ಸೈಟ್‌ನಾಗ ಮಾಡೋ ಕೆಲಸನೆಲ್ಲಾ, ಈಗ ನಿಮ್ಮ ಖಾಸ್ ಮೊಬೈಲ್‌ನಲ್ಲೇ ಖಟಾಖಟ್ ಮಾಡ್ಬೋದು.
ಆಫೀಸಿನ ಅಲೆದಾಟ, ಸಾಹೇಬರ ಹತ್ತಿರ ಅಪ್ಲಿಕೇಷನ್ ತಗೊಂಡು ಹೋಗೋ ಉಸಾಬರಿ ಎಲ್ಲಕ್ಕೂ ಇನ್ಮೇಲೆ ಫುಲ್ ಸ್ಟಾಪ್!
ಈ ಆ್ಯಪ್‌ನಿಂದ ನಮಗೇನು ಲಾಭ? (ಖಾಸ್ ಫೀಚರ್ಸ್)
ರಜೆ (Leave) ಹಾಕೋದು ಈಗ ತೀರಾ ಸಿಂಪಲ್:
ಮೊದಲೆಲ್ಲಾ ರಜೆ ಬೇಕಾದ್ರೆ ಕಚೇರಿಗೆ ಅರ್ಜಿ ಬರೆದು ಕೊಟ್ಟು, ‘ಸಾಹೇಬ್ರು ಸಹಿ ಮಾಡ್ತಾರೋ ಇಲ್ಲೋ’ ಅಂತ ಕಾಯಬೇಕಿತ್ತು. ಆದ್ರೆ ಕರ್ತವ್ಯ’ ಆ್ಯಪ್ ಓಪನ್ ಮಾಡಿ, ಎರಡೇ ನಿಮಿಷದಲ್ಲಿ ರಜೆಗೆ apply ಮಾಡಬೋದು.
ರಜೆ ಸಾಂಕ್ಷನ್ ಆಯ್ತೋ ಇಲ್ಲೋ ಅನ್ನೋದನ್ನ ಮನೆಗ ಕೂತೇ ನೋಡ್ಬೋದು.
ಹಾಜರಾತಿ (Attendance) ಫುಲ್ ಪಕ್ಕಾ:
ಇದರಾಗ ಜಿಯೋ-ಫೆನ್ಸಿಂಗ್ ಸಿಸ್ಟಮ್ ಐತಿ. ಅಂದ್ರೆ ನೀವು ಆಫೀಸ್ ಏರಿಯಾಗೆ ತಲುಪಿದ ತಕ್ಷಣ ನಿಮ್ಮ ಮೊಬೈಲ್‌ನಿಂದಲೇ ಅಟೆಂಡೆನ್ಸ್ ನಮೂದಿಸಬಹುದು. ‘ಲೇಟ್ ಆಯ್ತು’ ಅಂತ ಟೆನ್ಷನ್ ತಗೋಳೋ ಅಗತ್ಯನೇ ಇಲ್ಲ!
ನಿಮ್ಮ ಇ-ಸರ್ವಿಸ್ ಬುಕ್ (e-Service Book) ಕೈಯಾಗೆ ಐತಿ:
ನಿಮ್ಮ ಪ್ರೊಮೋಷನ್, ಟ್ರಾನ್ಸ್‌ಫರ್, ಸರ್ವಿಸ್ ಹಿಸ್ಟರಿ, ಇನ್‌ಕ್ರಿಮೆಂಟ್ ವಿವರಗಳನ್ನ ನೋಡೋಕೆ ಆಫೀಸಿನಾಗ ದಪ್ಪ ದಪ್ಪ ಫೈಲ್ ಹುಡುಕೋಬೇಕಿಲ್ಲ. ಆ್ಯಪ್ ಓಪನ್ ಮಾಡಿದ್ರೆ ಇಡೀ ಇ-ಸರ್ವಿಸ್ ಬುಕ್ ನಿಮ್ಮ ಕಣ್ಣಮುಂದಿರ್ತೈತಿ.
ಸಂಬಳದ ಚೀಟಿ (Pay Slip) ಒನ್-ಕ್ಲಿಕ್ ಡೌನ್‌ಲೋಡ್:
ಪ್ರತಿ ತಿಂಗಳು ಸಂಬಳ ಎಷ್ಟು ಬಂತು?
ಪಿಎಫ್ (PF), ಎನ್‌ಪಿಎಸ್ (NPS) ಎಷ್ಟು ಕಟ್ ಆಯ್ತು? ಅಂತ ತಿಳಿಯೋ ಪೇ ಸ್ಲಿಪ್ ಅನ್ನ ಒಂದೇ ಒಂದು ಕ್ಲಿಕ್‌ನಲ್ಲಿ ಡೌನ್‌ಲೋಡ್ ಮಾಡ್ಕೋಬಹುದು.
ಟೈಮ್ ಉಳಿತಾಯ, ಪಾರದರ್ಶಕತೆ ಜಾಸ್ತಿ:
ಸಣ್ಣಪುಟ್ಟ ಕೆಲಸಕ್ಕೆ ಕ್ಲರ್ಕ್ ( clerk ) ಅಥವಾ ಇತರ ಸಿಬ್ಬಂದಿತ್ರ ಹೋಗಿ ಕೆದಕಿ ಕೇಳೋದು ತಪ್ಪುತ್ತೆ. ಎಲ್ಲವೂ ಪಾರದರ್ಶಕವಾಗಿ ಆ್ಯಪ್‌ನಾಗ ಕಾಣೋದ್ರಿಂದ ನೌಕರರ ಟೆನ್ಷನ್ ಕಮ್ಮಿಯಾಗಿದೆ!
ನವೆಂಬರ್ 1ರಿಂದ ಕಾಲರ್ ಐಡಿ ಕಡ್ಡಾಯವೇ? ನಿಮ್ಮ ಮೊಬೈಲ್‌ನಲ್ಲಿ ಕರೆ ಮಾಡುವವರ ಹೆಸರು ಕಾಣಿಸುತ್ತಾ?
ಬಳಸೋದು ಹೆಂಗೆ?
ಡೌನ್‌ಲೋಡ್ ಮಾಡಿ: ನಿಮ್ಮ ಮೊಬೈಲ್ ಒಳಗೆ ಪ್ಲೇ ಸ್ಟೋರ್ (Play Store) ಗೆ ಹೋಗಿ ‘Kartavya’ ಅಂತ ಟೈಪ್ ಮಾಡಿ ಆ್ಯಪ್ ಡೌನ್‌ಲೋಡ್ ( download ) ಮಾಡಿಕೊಳ್ರಿ.
ಲಾಗಿನ್ ಆಗಿ: ನಿಮ್ಮ ಹೆಚ್.ಆರ್.ಎಮ್.ಎಸ್ ಕೆಜಿಐಡಿ / Employee ID ಹಾಕಿ, ಮೊಬೈಲ್‌ಗೆ ಬರೋ ಒಟಿಪಿ (OTP) ಎಂಟರ್ ಮಾಡಿದ್ರೆ ಆ್ಯಪ್ ರೆಡಿ!
Kartavya app download ಲಿಂಕ್ :
https://play.google.com/store/apps/details?id=com.kams&pcampaignid=web_share