ರೈತರು ಬೆಳೆ ವಿಮೆ ಮಾಡಿಸಿದ್ರೂ ಕೆಲವೊಮ್ಮೆ ಹಣ ಖಾತೆಗೆ ಬರೋದು ತಡ ಆಗುತ್ತೆ. ಇನ್ನು ಕೆಲವರಿಗೆ ವಿಮೆ ಅರ್ಜಿ ಹಾಕಿದ್ರೂ ಹಣ ಯಾಕೆ ಬಂದಿಲ್ಲ ಅನ್ನೋದೇ ಗೊತ್ತಾಗೋದಿಲ್ಲ. ಇಂಥ ಸಂದರ್ಭದಲ್ಲಿ ಗಾಬರಿ ಆಗೋ ಬದಲು ಕೆಲವು ವಿಷಯಗಳನ್ನು ಮೊದಲು ಚೆಕ್ ಮಾಡಿಕೊಳ್ಳಬೇಕು.
1. ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ
ಮೊದಲು ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಅಂತ ಚೆಕ್ ಮಾಡಿಕೊಳ್ಳಿ. ಅರ್ಜಿ ನಂಬರ್ ಅಥವಾ ಪಾಲಿಸಿ ವಿವರಗಳ ಸಹಾಯದಿಂದ ಅಧಿಕೃತ ಪೋರ್ಟಲ್‌ನಲ್ಲಿ ಮಾಹಿತಿ ಪಡೆಯಬಹುದು.
👉 ಅಧಿಕೃತ ಲಿಂಕ್: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
2. ಬ್ಯಾಂಕ್ ಖಾತೆ ವಿವರ ಸರಿಯಾಗಿದೆಯಾ ನೋಡಿ
ನೀವು ಬೆಳೆ ವಿಮೆ ಮಾಡಿಸುವಾಗ ಕೊಟ್ಟ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯಾ ಅಂತ ಪರಿಶೀಲಿಸಿ. ಖಾತೆ ಚಾಲ್ತಿಯಲ್ಲಿದೆಯಾ, IFSC ಕೋಡ್ ಮತ್ತು ಇತರ ವಿವರಗಳಲ್ಲಿ ತಪ್ಪಿದೆಯಾ ಅಂತ ಬ್ಯಾಂಕ್‌ನಲ್ಲಿ ವಿಚಾರಿಸಿ.
ಇದನ್ನೂ ಓದಿ : 2026ರ ಬೆಳೆ ಪರಿಹಾರ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ; ಇಲ್ಲಿದೆ ಡೈರೆಕ್ಟ್ ಲಿಂಕ್
3. ಅರ್ಜಿ ವಿವರಗಳಲ್ಲಿ ತಪ್ಪಿದ್ದರೆ ಸರಿಪಡಿಸಿ
ಹೆಸರು, ಜಮೀನಿನ ವಿವರ, ಬೆಳೆ ಮಾಹಿತಿ ಅಥವಾ ಬ್ಯಾಂಕ್ ಖಾತೆ ವಿವರಗಳಲ್ಲಿ ವ್ಯತ್ಯಾಸ ಇದೆಯಾ ಅಂತ ಪರಿಶೀಲಿಸಿ. ಸಮಸ್ಯೆ ಕಂಡುಬಂದರೆ ಸಂಬಂಧಪಟ್ಟ ಬ್ಯಾಂಕ್, ವಿಮಾ ಕಂಪನಿ ಅಥವಾ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
4. ಬೆಳೆ ಹಾನಿಯಾಗಿದ್ರೆ ದೂರು ಕೊಡಿ
ಮಳೆ, ಪ್ರವಾಹ ಅಥವಾ ಇತರ ವಿಮಾ ನಿಯಮಗಳಿಗೆ ಒಳಪಡುವ ಕಾರಣಗಳಿಂದ ಬೆಳೆ ಹಾನಿಯಾಗಿದ್ದರೆ, ನಿಗದಿತ ಅವಧಿಯೊಳಗೆ ಹಾನಿ ವರದಿ ಮಾಡುವುದು ಮುಖ್ಯ. ನಿಮ್ಮ ಪ್ರಕರಣಕ್ಕೆ ಅನ್ವಯಿಸುವ ನಿಯಮಗಳ ಬಗ್ಗೆ ವಿಮಾ ಕಂಪನಿ ಅಥವಾ ಕೃಷಿ ಇಲಾಖೆಯಿಂದ ಮಾಹಿತಿ ಪಡೆಯಿರಿ.
ಕರ್ನಾಟಕದ ರೈತರಿಗೆ ₹2,500 ಬರ ಪರಿಹಾರ: ಮೊದಲ ಕಂತಿನ ಹಣ ಯಾವಾಗ ಖಾತೆಗೆ ಬರುತ್ತೆ? ಯಾರಿಗೆ ಸಿಗುತ್ತೆ?
ಬೆಳೆ ವಿಮೆ ಸಂಬಂಧಿಸಿದ ದೂರು ಅಥವಾ ಮಾಹಿತಿ ಬೇಕಿದ್ದರೆ 14447 ಎಂಬ ಅಧಿಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.
ನಿಮ್ಮ fid ( farmer registration number ) ಸರಿಯಾಗಿ ಇದೆಯಾ ಅಂತಾ ಒಂದು ಸಾಲ check ಮಾಡ್ಕೊಳಿ, ಯಾಕಂದ್ರೆ ರೈತರ fid ಇಲ್ಲ ಅಂದ್ರು ಸಹ ನಿಮ್ಮ ಬೆಳೆ ವಿಮಾ ಹಣ ಬರಂಗಿಲ್ಲ.
5. ಹಣ ಬರದಿದ್ದರೆ ಏನು ಮಾಡಬೇಕು?
ಎಲ್ಲಾ ವಿವರ ಸರಿಯಾಗಿದ್ದರೂ ಹಣ ಜಮೆ ಆಗದಿದ್ದರೆ, ನಿಮ್ಮ ಅರ್ಜಿ ಅಥವಾ ಕ್ಲೇಮ್‌ನ ಸ್ಥಿತಿ ಏನಿದೆ ಅಂತ ವಿಚಾರಿಸಿ. ಅರ್ಜಿ ಸಂಖ್ಯೆ, ವಿಮೆ ರಸೀದಿ ಮತ್ತು ಬ್ಯಾಂಕ್ ವಿವರಗಳನ್ನು ಕೈಯಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ.
ಅಧಿಕೃತ ವೆಬ್‌ಸೈಟ್: PMFBY ಬೆಳೆ ವಿಮೆ ಪೋರ್ಟಲ್
ರೈತರಿಗೆ ಸಲಹೆ ಏನಂದ್ರೆ…
ರೈತರೇ, ಬೆಳೆ ವಿಮೆ ಹಣ ಬರಬೇಕಾದರೆ ಮೊದಲು ನಿಮ್ಮ ಅರ್ಜಿ ಮತ್ತು ಕ್ಲೇಮ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ಸಮಸ್ಯೆ ಇದ್ರೆ ಸಂಬಂಧಪಟ್ಟ ಕಚೇರಿಯಲ್ಲಿ ವಿಚಾರಿಸಿ. ಕೇವಲ ಸ್ಟೇಟಸ್ ಚೆಕ್ ಮಾಡಿದ್ದರಿಂದ ಹಣ ಖಚಿತವಾಗಿ ಜಮೆ ಆಗುತ್ತೆ ಅಂತ ಹೇಳಲಾಗುವುದಿಲ್ಲ; ಹಣ ಬಿಡುಗಡೆಯಾಗುವುದು ನಿಮ್ಮ ಅರ್ಹತೆ, ಬೆಳೆ ಹಾನಿ ಮೌಲ್ಯಮಾಪನ ಮತ್ತು ವಿಮಾ ಕ್ಲೇಮ್ ಅನುಮೋದನೆಗೆ ಅನುಗುಣವಾಗಿರುತ್ತೆ.
ರೈತರು ಏನೇ ತೊಂದರೆ ಇದ್ರೆ ಸರ್ಕಾರಿ ಕಚೇರಿ ಮತ್ತು ಸಂಬಂಧಪಟ್ಟ ಕೃಷಿ ಇಲಾಖೆನೆ ಭೇಟಿ ಮಾಡ್ರಿ, ಯಾವ್ದೆ ದಲ್ಲಾಳಿ ಮತ್ತ ಅನಧಿಕೃತ ಇಲಾಖೆಗಳನ್ನ ಭೇಟಿ ಮಾಡ್ಬೇಡಿ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣ ಭೇಟಿ ಮಾಡಿ. ಇಲ್ಲಿ ಒತ್ತಿರಿ.