ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಅಕ್ಟೋಬರ್ 19ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಕೆಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಇನ್ನು ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲಾವಾರು ಎಚ್ಚರಿಕೆಗಳು ದಿನದಿಂದ ದಿನಕ್ಕೆ ಬದಲಾಗಬಹುದು. (Mausam)
ಹಾವೇರಿ, bengaluru , ಮಂಡ್ಯ, ರಾಮನಗರ, ದಾವಣಗೆರೆ, ಇನ್ನೂ ಕೆಲವು ಜಿಲ್ಲೆಗಳಿಗೆ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ : ರಾಜ್ಯ ಬರ ಘೋಷಣೆ ಆದ 217 ತಾಲೂಕುಗಳ ಪಟ್ಟಿ, ನಿಮ್ಮ ತಾಲೂಕು ಇದೆಯಾ? ಚೆಕ್ ಮಾಡಿ
ಹಾವೇರಿ : ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಮತ್ತು ಅಂದಾನಿಕೊಪ್ಪ, ಬನ್ನಿಹಟ್ಟಿ, ಬಿಸಲಹಳ್ಳಿ, ಅಣೂರು ಗ್ರಾಮಗಳಲ್ಲಿ ಮದ್ಯಾಹ್ನ 3 ಘಂಟೆ ಇಂದ 4 ಘಂಟೆ ಸುಮಾರಿಗೆ ಸಾಧಾರಣ ಮಳೆ ಬಂದಿದೆ.
ರೈತರು ಈಗಾಗಲೇ ಮೆಕ್ಕೆಜೋಳ ಕಟಾವು ಮಾಡ್ತಾ ಇದಾರೆ. ಮೆಕ್ಕೆಜೋಳ ಮುರಿದು ಕಟಾವು ಮಾಡಿ ಬಣವೆ ಮಾಡಿ, ಅವನ್ನ ಮಳೆಗೆ ಹಾಳು ಆಗ್ಬಾರ್ದು ಅಂತಾ ಮುಚ್ಚುತ್ತಾರೆ.
2026ರ ಬೆಳೆ ಪರಿಹಾರ ಸ್ಟೇಟಸ್ ಮೊಬೈಲ್ನಲ್ಲೇ ಚೆಕ್ ಮಾಡಿ; ಇಲ್ಲಿದೆ ಡೈರೆಕ್ಟ್ ಲಿಂಕ್
ಈಗ ಹಿಂಗಾರು ಮಳೆ ಬಂದ್ರೆ ಹೊಲ ಮತ್ತೆ rotavator ಸಹಾಯದಿಂದ ಹದ ಮಾಡಿ, ಹುರುಳಿ ಬಿತ್ತಿದರೆ ಮುಂದೆ ಬರುವ ಚಳಿಗೆ ಒಳ್ಳೆ ಇಳುವರಿ ಬರುತ್ತೆ ಅಂತಾರೆ ರೈತರು.
ಜನರು ಎಚ್ಚರಿಕೆಯಿಂದಿರಿ
ಮಳೆಯ ಸಂದರ್ಭದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಗುಡುಗು ಮತ್ತು ಸಿಡಿಲು ಕಾಣಿಸಿಕೊಂಡಾಗ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಸ್ಥಳೀಯ ಹವಾಮಾನ ಮುನ್ಸೂಚನೆ ಪರಿಶೀಲಿಸುವುದು ಉತ್ತಮ.
ಗಮನಿಸಿ: ಮಳೆಯ ಪ್ರಮಾಣ ಮತ್ತು ಅಲರ್ಟ್ಗಳ ಕುರಿತು ತಾಜಾ ಮಾಹಿತಿಗಾಗಿ ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವೆಬ್ಸೈಟ್ ಪರಿಶೀಲಿಸಿ.